
ಖಂಡಿತವಾಗಲೂ ಈ ದುರಂತ ಯಾವ ಪಾಕಿಸ್ತಾನಿ ಭಯೋತ್ಪಾದಕರ ದಾಳಿಗೂ ಕಮ್ಮಿಯಿಲ್ಲ.ಛತ್ತೀಸಗಡದ ದಂಟೆವಾಡ ಜಿಲ್ಲೆಯಲ್ಲಿ ಭೀಕರ ಹತ್ಯಾಕಾಂಡ ನಡೆಸಿರುವ ನಕ್ಸಲರು 76 ಮಂದಿ CRPF ಯೋಧರನ್ನು ಬಲಿ ತೆಗೆದುಕೊಂಡಿದ್ದಾರೆ.ದಟ್ಟ ಕಾನನದಲ್ಲಿ ನಮ್ಮ ಅಮೂಲ್ಯ ಸೈನಿಕರ ರಕ್ತಪಾತವಾಗಿದೆ.ನಕ್ಸಲ್ ಚಳುವಳಿಯ ಇತಿಹಾಸದಲ್ಲೇ ಅತ್ಯಂತ ಭೀಕರ ಕೃತ್ಯ ಇದು ಎನ್ನುವುದು ತೀರ ಸ್ಪಷ್ಟ.ಗಾಬರಿ ಹುಟ್ಟಿಸುವ ವಿಷಯವೆಂದರೆ ಈ ರಾಷ್ಟ್ರವಿರೋಧಿ ಸಂಘಟನೆಯ ಅಟ್ಟಹಾಸ ಅಪಯಕಾರಿ ಮಟ್ಟದಲ್ಲಿ ಹೆಚ್ಚುತ್ತಲೇ ಇದೆ.ಅಂಕಿ ಅಂಶಗಳ ಪ್ರಕಾರ ನಕ್ಸಲ್ ದಾಳಿಯಲ್ಲಿ ಸತ್ತವರ ಸಂಖ್ಯೆ 1996ರಲ್ಲಿ 156ರಷ್ಟಿದ್ದರೆ 2009 ರಲ್ಲಿ 1134ರಷ್ಟಾಗಿದೆ!!BBC ಮೂಲದ ಪ್ರಕಾರ ನಕ್ಸಲ್ ಚಳುವಳಿಯ ಈ 20 ವರ್ಷಗಳಲ್ಲಿ ಬಲಿಯಾದ ಜೀವಗಳು 6000ಕ್ಕೂ ಹೆಚ್ಚು...
'Operation Green hunt!'ಪಿ.ಚಿದಂಬರಂ ಅವರ ನೇತೃತ್ವದಲ್ಲಿ ನಕ್ಸಲರ ವಿರುದ್ಧ ಹೀಗೊಂದು ಕಾರ್ಯಾಚರಣೆ ಕೆಲವೊಂದು ತಿಂಗಳುಗಳಿಂದ ನಡೆಯುತ್ತಿದೆ ಎಂದು ನೀವೆಲ್ಲಾ ಕೇಳಿಯೇ ಇರುತ್ತೀರಿ.ಪ್ರಧಾನಿ ಮನನೋಹನ್ ಸಿಂಗ್ ಅವರು ಕೂಡ ನಕ್ಸಲರು ಭಾರತದ ರಾಷ್ಟ್ರೀಯ ಭದ್ರತೆಗೆ ಅತಿ ದೊಡ್ಡ ಆಂತರಿಕ ಅಪಾಯ ಎಂದು ಘೋಷಿಸಿದ್ದಾರೆ.ಈ ಎಲ್ಲಾ ಹಿನ್ನೆಲೆಯಲ್ಲಿ ನಕ್ಸಲರ ಈ ದಾಳಿ ಸರ್ಕಾರಕ್ಕೆ ಅತ್ಯಂತ ದೊಡ್ಡ ಹಿನ್ನಡೆಯೇ ಸರಿ.ಅಮಾಯಕ ಜನರ ಸಾವಿನ ನೋವಿನ ಜೊತೆಗೆ ಈ ಸಂಘಟನೆ ದೇಶಕ್ಕೆ,ಜನರ ನೆಮ್ಮದಿಗೆ ಮಹಾ ಕಂಟಕವಾಗಿರುವುದು ಭಯಾನಕ ಸತ್ಯ.ಇಷ್ಟು ದಿನ ಪಾಕಿಸ್ತಾನಿ ಭಯೋತ್ಪಾದಕರ ಗುಂಡಿನ ಆರ್ಭಟದ ನಡುವೆ ಮಂಕಾಗಿ ಕಾಣುತ್ತಿದ್ದ ನಕ್ಸಲಿಸಂ ನಂತ ಸಮಸ್ಯೆ ಈಗ ನಿಜಕ್ಕೂ ಬೃಹತ್ತಾಗಿ ಬೆಳೆದು ನಿಂತಿದೆ.
ಪಾಕಿಸ್ತಾನವನ್ನಂತೂ ಬಿಡಿ,ಅದು ನಮ್ಮ default enemy!ಪಕ್ಕದ ಚೀನಾ ಕೂಡ ನಮ್ಮ ನೆಲಕ್ಕಾಗಿ ಹಸಿದು ಕುಳಿತಿರುವುದು ಹೊಸ ವಿಷಯವೇನಲ್ಲ.ಅರುಣಾಚಲದ ಗಡಿಯವರೆಗೂ ರೈಲ್ವೇ ಸಂಪರ್ಕವನ್ನು ಏರ್ಪಡಿಸಿರುವುದಲ್ಲದೆ, ಸೈನಿಕರನ್ನೂ, ಶಸ್ತ್ರಾಸ್ತ್ರಗಳನ್ನೂ ಗಡಿ ಭಾಗಕ್ಕೆ ನಿರಂತರವಾಗಿ ರವಾನಿಸುತ್ತ ಭಾರತದ ವಿರುದ್ಧ ಯುದ್ಧಕ್ಕೆ ಎಲ್ಲಾ ತಯಾರಿಯನ್ನೂ ಮಾಡಿಕೊಳ್ಳುತ್ತಿದೆ.ಹೀಗೆ ಅರುಣಾಚಲ ಪ್ರದೇಶ ಕೂಡ ಇನ್ನೊಂದು ಕಾಶ್ಮೀರವಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿದ್ದರೆ ನಾವು ಅಭಿಮಾನಿ ಭಾರತೀಯರು ಚಿಲ್ಲರೆ ರಾಜಕೀಯ ಕಸರತ್ತುಗಳು, ಯಾವುದೇ ಪ್ರಯೋಜನಕ್ಕೆ ಬಾರದ ವಿವಾದಗಳ ಬಾಲ ಹಿಡಿದುಕೊಂಡು ಮಜಾ ಅನುಭವಿಸುತ್ತಿದ್ದೇವೆ.ಇತ್ತ ಇಡೀ ಜಗತ್ತು ತಮಾಷೆ ನೋಡುತ್ತಿದೆ.ಹೇಗೆ ಅಂತೀರಾ?
ನಮ್ಮ ದೇಶದ ಸಾಧಕರನ್ನು,ಜಗತ್ತು ಯಾವ ವ್ಯಕ್ತಿಗಳ ಮೂಲಕ ಭಾರತವನ್ನು ಗುರುತಿಸುವುದೋ ಅಂತ ವ್ಯಕ್ತಿಗಳನ್ನೂ ಸಹ ಸಲ್ಲದ ಕಾರಣಕ್ಕೆ ಸಾರ್ವಜನಿಕವಾಗಿ ಅವಮಾನಿಸಿ, ಪತ್ರಿಕೆಗಳಲ್ಲಿ ನಿಂದಿಸಿ, ನಮ್ಮನ್ನು ನಾವೇ ಜಗತ್ತಿನ ಮುಂದೆ ಕುಬ್ಜರನ್ನಾಗಿ ಬಿಂಬಿಸಿಕೊಳ್ಳುವ ಕೆಟ್ಟ ಚಟ ನಮಗಂಟಿಕೊಂಡು ಬಹಳ ವರ್ಷಗಳೇ ಆಯಿತು.ಅಷ್ಟಕ್ಕೂ ಸಾನಿಯಾ ಮಿರ್ಜಾ ಶೊಯೆಬ್ ನನ್ನು ಮದುವೆಯಾದರೆ ಅದನ್ನು ನಾವ್ಯಾಕೆ national issue ವನ್ನಾಗಿ ಮಾಡಬೇಕು?ಆತ ಪಾಕಿಸ್ತಾನಿಯೇ ಇರಬಹುದು, ಆತನ ಕ್ರಿಕೆಟ್ ಬದುಕಿನಲ್ಲಿ ಹಲವಾರು ವಿವಾದಗಳಿರಬಹುದು, ಆತನಿಗೆ ಈಗಾಗಲೇ ಮದುವೆಯಾಗಿದೆ ಎಂಬ ಆರೋಪವೂ ಇರಬಹುದು.ಆದರೆ ಇವಲ್ಲಾ ಸಾನಿಯಾಗೆ ತಿಳಿಯದ ವಿಷಯಗಳಲ್ಲ,ತನ್ನ ಬಾಳ ಸಂಗಾತಿಯಾಗುವವನು ಹೇಗಿರಬೇಕು ಎಂದು ನಮಗಿಂತ ಚೆನ್ನಾಗಿ ಆಕೆಗೆ ಗೊತ್ತಿದೆ.ಒಂದು ವೇಳೆ ಆಕೆಯ ನಿರ್ಧಾರ ತಪ್ಪು ಅಂತಲೇ ತಿಳಿದುಕೊಳ್ಳೋಣ, ಆದರೆ ಈ ಕಾರಣಕ್ಕೆ ದೇಶದೆಲ್ಲೆಡೆ ಈ ಪರಿಯ ಸಂಚಲನ ಸರಿಯೇ? ಒಬ್ಬ ವಿದೇಶೀ ಪ್ರಜೆಯ ದೃಷ್ಟಿಯಲ್ಲಿ ನೋಡಿ, ಒಬ್ಬ ಭಾರತೀಯ ಟೆನ್ನಿಸ್ ತಾರೆ ಪಾಕಿಸ್ತಾನಿ ಕ್ರಿಕೆಟ್ ಆಟಗಾರನನ್ನು ಮದುವೆಯಾಗುವುದನ್ನು ವಿರೋಧಿಸಿ ಹಿಂದೂ ಸಂಘಟನೆಗಳು ಪ್ರತಿಭಟನೆ ನದೆಸುತ್ತವೆ ಎಂದು ತಿಳಿದಾಗ ಇಡೀ ಭಾರತೀಯ ಮನಸ್ಥಿತಿಯೇ ಆತನಿಗೆ ತಮಾಷೆಯಾಗಿ,sickening ಆಗಿ ಕಾಣುವುದಿಲ್ಲವೇ?
ಇನ್ನು ಅಮಿತಾಭ್ ಬಚ್ಚನ್ ,ಶಾರುಖ್ ರ ಕಥೆಯೂ ಇದಕ್ಕಿಂತ ಭಿನ್ನವಾಗೇನಿಲ್ಲ.ಅಮಿತಾಭ್ ಗುಜರಾತ್ ನ ಪ್ರವಾಸೋದ್ಯಮ ರಾಯಭಾರಿಯಾದ ವಿಷಯ ಅಥವಾ ಶಾರುಖ್ ನ IPL ಆಟಗಾರರ ಕುರಿತ ಹೇಳಿಕೆಯನ್ನು ಅನಗತ್ಯವಾಗಿ ವಿವಾದವನ್ನಾಗಿಸಿದವರು ನಾವು.ಅಷ್ಟಕ್ಕೂ ರಾಯಭಾರಿ ರಾಜ್ಯವನ್ನು ಪ್ರತಿನಿಧಿಸುತ್ತಾನೆ, ಸರ್ಕಾರವನ್ನಲ್ಲ ಎಂದು ಯೋಚಿಸುವಷ್ಟೂ ನಾವು ಪ್ರಬುದ್ಧರಲ್ಲವೇ? ಸಾಧನೆಗೈದಾಗ ಹೊಗಳಿ ಅಟ್ಟಕ್ಕೇರಿಸಿ ದೇವಸ್ಥಾನ ಕಟ್ಟುವ ನಾವು, ಕ್ಷುಲ್ಲಕ ವಿಷಯಗಳಿಗೆ ನಮ್ಮ ಹೆಮ್ಮೆಯ ಸಾಧಕರನ್ನು ಮುಜುಗರಕ್ಕೀಡುಮಾಡುವುದಲ್ಲದೆ, ಜಗತ್ತಿನ ಮುಂದೆ ಹಾಸ್ಯದ ವಸ್ತುವನ್ನಾಗಿಸುತ್ತೇವೆ.
ಇನ್ನು ದೇಶದ ರಾಜಕಾರಣವೆನ್ನುವುದು ತೀರಾ ಕೀಳುಮಟ್ಟಕ್ಕಿಳಿದಿದೆ.ಕರ್ನಾಟಕ ಸರ್ಕಾರದ ಜುಟ್ಟು ರಾಜ್ಯದ ಸಂಪತ್ತನ್ನು ಕಾನೂನುಬಾಹಿರವಾಗಿ ಕೊಳ್ಳೆ ಹೊಡೆಯುತ್ತಿರುವ ರೆಡ್ಡಿಗಳ ಕೈಯಲ್ಲಿದೆ ಎನ್ನುವುದು ಬಹಿರಂಗ ಸತ್ಯ. ಇತ್ತೀಚಿಗೆ ಅವರ ಆರ್ಭಟ ಕಡಿಮೆಯಾಗಿದ್ದರೂ ಈ ವಿಷಯದಲ್ಲಿ ನಮ್ಮ ಮುಖ್ಯಮಂತ್ರಿಗಳು ಅಸಹಾಯಕರು.ಚಿಲ್ಲರೆ ರಾಜಕೀಯ ಮಾಡುವುದು, ಅತ್ಯಂತ ಬಾಲಿಶ ಹೇಳಿಕೆಗಳನ್ನು ನೀಡಿ ಬೇರೆಯವರ ಬಾಯಿಗೆ ಆಹಾರವಾಗುವುದು ಇವೆಲ್ಲ ರಾಜಕೀಯದಲ್ಲಿ ತೀರಾ ಸಾಮಾನ್ಯ.ಇತ್ತೀಚಿಗೆ ಮಾಯಾವತಿಯವರಿಗೆ ನೋಟಿನ ಹಾರ ಹಾಕಿದ ವಿವಾದ ಹುಟ್ಟಿಕೊಳ್ಳುತ್ತಿದ್ದಂತೆ , ತಮ್ಮನ್ನು ದಲಿತ್ ಕಿ ಬೇಟಿ ಎಂದು ಕರೆದುಕೊಳ್ಳುವ ಆಕೆ ಈ ಅವಕಾಶವನ್ನು ಚೆನ್ನಾಗಿಯೇ ಉಪಯೋಗಿಸಿಕೊಂಡರು.ಇದೆಲ್ಲಾ ನನ್ನ ವಿರುದ್ಧ ಮೇಲಿನ ಜಾತಿಯವರ ಪಿತೂರಿ ಎಂದ ಆಕೆ ಜನರ ಮುಂದೆ ತಾನೊಬ್ಬ victim ಎಂಬಂತೆ ಬಿಂಬಿಸಿಕೊಂಡು, ಅನುಕಂಪ ಗಿಟ್ಟಿಸಿಕೊಂಡರು. ಇರಲಿ ಬಿಡಿ, ಮಾಯಾವತಿಯವರ ಕೆಳ ಮಟ್ಟದ ರಾಜಕಾರಣ ಹೊಸದೇನಲ್ಲ , ಆದರೆ ಆರ್ಥಿಕ ಬೆಳವಣಿಗೆಯಲ್ಲಿ ದೇಶಕ್ಕೆ ಮಾದರಿಯಾಗಿರುವ, ಇಡೀ ಎಷ್ಯಾದಲ್ಲೇ ನಂಬರ್ 1 ಎನ್ನಿಸಿಕೊಂಡಿರುವ, 24 ಘಂಟೆಗಳ ಕಾಲವೂ ರೈತರಿಗೆ ವಿದ್ಯುತ್ ಒದಗಿಸುವ ಏಕೈಕ ರಾಜ್ಯವಾದ ಗುಜರಾತ್ ನ ನಂಬರ್ 1 ಮುಖ್ಯಮಂತ್ರಿ ನರೇಂದ್ರ ಮೋದಿಯವರೂ ಈ politics of victimhood ಗೆ ಹೊರತಾಗಿಲ್ಲ.ಗೋಧ್ರ ಹತ್ಯಾಕಾಂಡದ ವಿಚಾರಣೆ ವೇಳೆ ಮೋದಿ ಹಾಜರಾಗದೆ ಗಂಭೀರ ತಪ್ಪೆಸಗಿದ್ದಲ್ಲದೇ, ವಿವಾದ ಹುಟ್ಟಿಕೊಂಡಾಗ ಇದು ಪ್ರತಿಪಕ್ಷದವರು ನನಗೆ ಕೆಟ್ಟ ಹೆಸರು ತರಲು ನಡೆಸಿರುವ ಸಂಚು ಎಂದು ನುಡಿದಿದ್ದರು!! ( for further reading- http://ibnlive.in.com/blogs/rajdeepsardesai/1/61699/the-politics-of-victimhood.html).

ಇನ್ನು ಶಿವಸೇನೆಯೆಂಬ ಎಲ್ಲಾ ಚುನಾವಣೆಗಳಲ್ಲೂ ಜನರಿಂದ ಛೀಮಾರಿ ಹಾಕಿಸಿಕೊಳ್ಳುವ ಪಕ್ಷವೊಂದು ಮುಂಬೈ ಯನ್ನು ಹಾಸ್ಯನಾಟಕಮಂದಿರವನ್ನಾಗಿಸಿದೆ.ತಮ್ಮ ಪಕ್ಷದ ಮೌಲ್ಯಗಳು, ಉದ್ದೇಶಗಳ ಬಗ್ಗೆ ನಾಯಕರಿಗೇ ಸ್ಪಷ್ಟತೆ ಇಲ್ಲ. ಭಾರತೀಯರ ಮೇಲೆ ಪಾಕಿಸ್ತಾನಿ ಭಯೋತ್ಪಾದಕರಿಂದ, ಆಸ್ಟ್ರೇಲಿಯನ್ನರಿಂದ ಹಲ್ಲೆ ನಡೆಯುತ್ತಿದೆ ಎಂದು ಪ್ರತಿಭಟಿಸುವ ಇವರಿಗೆ, ತಾವು ಹೊಡೆದು-ಬಡಿದು, ಹಿಂಸೆ ನೀಡುವ non-maharashtrians ಕೂಡ ಭಾರತೀಯರು ಎಂಬುದು ಮರೆತೇ ಹೋಗಿರುತ್ತದೆ. ಉಳಿದ ಸಮಯದಲ್ಲಿ ಅನ್ಯರಿಗೆ ಜಾಗವಿಲ್ಲ, ಮುಂಬೈ ನಮ್ಮದು ಎಂದು ಒದರಿಕೊಳ್ಳುವ ಇವರು, 26/11 ದಾಳಿಯ ಸಮಯದಲ್ಲಿ ಎಲ್ಲಿ ಅಡಗಿ ಕುಳಿತಿದ್ದರೋ? ನಿಷ್ಠಾವಂತ ಪೋಲಿಸ್ ಅಧಿಕಾರಿಗಳು ಹತರಾದರು, NSG commando ಗಳು ಬಲಿಯಾದರು, ನಮಗೆ ಯಾರ ಸಹಾಯವೂ ಬೇಕಾಗಿಲ್ಲ, ಮುಂಬೈ ನಮ್ಮದು, ಅದನ್ನು ನಾವೇ ರಕ್ಷಿಸಿಕೊಳ್ಳುತ್ತೇವೆ ಎಂದೇಕೆ ಹೇಳಲಿಲ್ಲ? ಇಂಥ ಬರೀ ಬಡಾಯಿಕೋರರು, pseudo-ಮರಾಠಿ ಪ್ರೇಮಿಗಳು ದೇಶವಾಸಿಗಳ ಅಷ್ಟೇಕೆ ವಿದೇಶೀಯರ ದೃಷ್ಟಿಯಲ್ಲಿ ಮುಂಬೈ ಚಿತ್ರಣವೇ ಬದಲಾಗುವಂತೆ ಮಾಡಿ ದೇಶದ ಶಾಂತಿಭಂಗಕ್ಕೆ ತಮ್ಮ ಕೈಲಾದ ಸೇವೆ ಸಲ್ಲಿಸಿದ್ದಾರೆ!!! ಇಂಥವರು ಅಂಧ ಮರಾಠಿಗರಂತೆ ವರ್ತಿಸುತ್ತಾ ಭಾರತೀಯತೆಯನ್ನೇ ಮರೆತುಬಿಟ್ಟಿದ್ದಾರೆ.
ಇಂಥಹ ಅಪಸವ್ಯಗಳಿಗೆ ಕೊನೆ ಎಲ್ಲಿ? ಶಿವ ಶಿವಾ, please save my Nation…!!!
ಲೇಖನ ಅರ್ಥವತ್ತಾಗಿ ಮೂಡಿಬಂದಿದೆ.
ಪ್ರತ್ಯುತ್ತರಅಳಿಸಿಥ್ಯಾಂಕ್ಸ್...
-ಗಿರಿ
ಹಾಯ್ ಸ್ನೇಹ..
ಪ್ರತ್ಯುತ್ತರಅಳಿಸಿಈಗ ನಿಮ್ಮ ಬರಹಕ್ಕೆ ನಿಮ್ಮ ಶೀರ್ಷಿಕೆ ಸರಿ ಹೊಂದುತ್ತೆ..
ಬಿಡಿ ಬಿಡಿಯಾಗಿ ಒದಿಕೊಂಡಾಗ ನಿಮ್ಮ ಬರಹ ಅದ್ಬುತ... ಶೈಲಿ ಮಸ್ತ್ ..
ಆದರೆ ಒಟ್ಟಾಗಿ ಓದಿದಾಗ ಎಲ್ಲೋ ಒಂದಕ್ಕೊಂದು ಕೊಂಡಿ ಸಿಗದ ಅನುಭವ..
ನೀವು ಹೇಳಿದ್ದು ತುಂಬಾ ಸತ್ಯ.. ನಮ್ಮ ದೇಶವನ್ನು ಕೆಟ್ಟ ವಿಷಯಗಳಿಂದ ಕೆಟ್ಟ ಜನಗಳಿಂದ ಕಾಪಾಡಬೇಕಾದ ತುರ್ತು ಪರಿಸ್ಥಿತಿ ಇದೆ.. ಮಾಧ್ಯಮದವರೂ ಕೂಡ ಯಾವ ವಿಷಯ ರಂಜನೀಯವಾಗಿರುತ್ತೊ ಅದನ್ನ ದೊಡ್ಡ ಸುದ್ದಿ ಮಾಡ್ತಾರೆ, ಆದರೆ ಅವರನ್ನು ದೂಷಿಸಿ ಪ್ರಯೋಜನವಿಲ್ಲ... ಜನರು ಅದನ್ನೇ ಇಷ್ಟ ಪಡ್ತಾರೆ .. ಅದಕ್ಕೇ ಮಾಧ್ಯಮದವರೂ ಕೂಡಾ ಅದಕ್ಕೇ ಪ್ರಾಮುಖ್ಯತೆ ಕೊಡ್ತಾರೆ..
ಯಾರಿನ್ನ ಬದಲು ಮಾಡಬೇಕೊ .. ನಾವೇ ಬದಲಾಗಬೇಕೋ ಇದು ಬಗೆ ಹರಿಯದ ವಿಚಾರ.. ಈ ಸಂದರ್ಭದಲ್ಲಿ ನಿಮ್ಮ ಬರಹ ತುಂಬಾ ಅರ್ಥವತ್ತಾಗಿದೆ.. ಸಕಾಲಿಕವಾಗಿದೆ..
ಬರೆಯುತ್ತಿರಿ..
ಪ್ರವಿ
good blog. why you stop? please continue.
ಪ್ರತ್ಯುತ್ತರಅಳಿಸಿ